Index   ವಚನ - 436    Search  
 
ಚಂದ್ರಮಂಡಲದಲ್ಲಿ ರವಿ ಅಗ್ನಿಯೋಕುಳಿಯನಾಡುವದ ಹಿಂದಳ ಕೇರಿಯವರು ಕಂಡು ಮುಂದಳೊರವರಿಗೆ ಮೊರೆಯ ಹೇಳುತ್ತಿದಾರೆ ನೋಡಿರೇ. ಮುಂದಳೂರವರೆಲ್ಲಾ ರವಿಯೋಕುಳಿಯ ಸಂಗದಿಂದ ಮಂಗಳ ಮುಂಗಳವೆನುತ ಶಿವಲಿಂಗೈಕ್ಯರಾದುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.