Index   ವಚನ - 437    Search  
 
ಮರ್ತ್ಯಲೋಕದುದರದೊಳಗೆ ಮೃತ್ಯುದೇವತೆ ಕತ್ತೆ ಕುದುರೆಯ ಹಡೆದು ಪುತ್ರೋತ್ಸಾಹವ ಮಾಡುವದ ಕಂಡು ಸತ್ಯಲೋಕದ ಸತಿಯರು ಬಂದು ಇದೆತ್ತಳುಚ್ಚಾಹವೆಂದು ಬೆಸಗೊಳಲು ಕತ್ತೆ ಕುದುರೆಗಳು ಸತ್ತು ಮೃತ್ಯು ದೇವತೆಯೆತ್ತ ಹೋದಳೆಂದರಿಯೆ. ಆ ಲೋಕವೆಲ್ಲವು ಮುಕ್ತಿ ಸಾಮ್ರಾಜ್ಯವಾದುದ ಕಂಡು ಇದು ನಿತ್ಯ ನಿಜಲಿಂಗೈಕ್ಯವೆಂದರಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.