Index   ವಚನ - 452    Search  
 
ತಾನೆ ಬ್ರಹ್ಮವೆಂದು ಕರ್ತೃಹೀನನಾದ ವಾಗದ್ವೈತಿಯಲ್ಲ. ಅನಾದಿ ಭಿನ್ನವಾಗಿ ದ್ವೈತಿಯಲ್ಲ ನೋಡಾ ಶರಣನು. ಅದೇನು ಕಾರಣವೆಂದರೆ: ಮಹಾಘನ ಪರಶಿವತತ್ವದಲ್ಲಿ ಚಿತ್ತು ಉದಯಿಸಿತ್ತು. ಆ ಚಿಚ್ಛಕ್ತಿಯಿಂದ ಶಿವಶರಣನುದಯಿಸಿದನು. ಅಂತು ಉದಯಿಸಿದ ಚಿದ್ರೂಪಮನೇ ಶರಣನು; ಸದ್ರೂಪವೇ ಲಿಂಗವು. ಈ ಶರಣ ಲಿಂಗವೆರಡರ ಸಂಬಂಧವ ದ್ವೈತವೆನಲಿಲ್ಲ; ಅದ್ವೈತವೆನಲಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.