Index   ವಚನ - 460    Search  
 
ಜಂಗಮದ ಗುಣವನು, ಜಂಗಮದ ಭೇದವನು ಜಂಗಮದ ರೂಪವನು ಹೇಳಿಹೆ ಕೇಳಿರಣ್ಣಾ. ಜಂಗಮವೆಂದರೆ ಪರಮಜ್ಞಾನ ಸ್ವರೂಪನು. ಒಂದಿನ ಉಂಟಾಗಿ, ಒಂದಿನ ಇಲ್ಲ[ವಾಗಿಪ್ಪ] ಉಪಜೀವನಕ್ಕಲ್ಲ ಕಾಣಿರಣ್ಣಾ. ಉಪಾಧಿ[ಕ], ನಿರೂಪಾಧಿಕನೆಂಬ ಸಂದೇಹಭ್ರಾಂತನಲ್ಲ ಕಾಣಿಭೋ. ಸತ್ತು ಚಿತ್ತಾನಂದಭರಿತನು. ಭಕ್ತನ ಪ್ರಾಣವೇ ತಾನಾಗಿಪ್ಪ ನಿತ್ಯ ಪರಿಪೂರ್ಣನೇ, ಜಂಗಮದೇವನೆಂದರಿಯಲು ಯೋಗ್ಯ ಕಾಣಿ ಭೋ. ಆ ಘನ ಚೈತನ್ಯವೆಂಬ ಜಂಗಮವ ಮನೋಭಾವದಲ್ಲಿ ಆರಾಧಿಸಿ ಸುಖಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.