Index   ವಚನ - 469    Search  
 
ಕಣ್ಣಿನಲ್ಲಿ ಕಂಡು ಮನದಲ್ಲಿ ಬಯಸಿ ಬಣ್ಣಗುಂದಿ ಬಳಲುವರಯ್ಯ. ಬಂದರೆ ಹೆಚ್ಚಿ, ಬಾರದಿದ್ದರೆ ಕುಂದಲೇತಕೆ? ಕುಂದಿದರೆ ಬಪ್ಪುದೆ? ಹಿರಿದು ಜರಿದು ಹೇಡಿಗೊಂಡು ಕರಗಿ ಕೊರಗಿ ಕೋಡಿವರಿದುಬೆಂದು ನಿಂದುರಿದು ಕಡುನೊಂದು ಭವಬಡುತ್ತಿಪ್ಪರಯ್ಯ. ಒಂದು ನಿಮಿಷ ನಿಮಿಷಾರ್ಧ ನಿಮ್ಮ ನೆನಹಿಲ್ಲ ನೋಡಾ! ಆಶೆಯೆಂಬ ಮಾಯಾಪಾಶದೊಳಗೆ ಸಿಕ್ಕಿ ದೋಷ ದುರ್ಗುಣದಿಂದ ಬಿದ್ದುರುಳುವ ಪಾಶಬದ್ಧರ ಈಶ ಲಾಂಛನಧಾರಿಗಳೆಂತೆಂಬೆನಯ್ಯ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.