Index   ವಚನ - 473    Search  
 
ಹೆಣನ ಕಂಡರೆ ನಾಯಿ ಕಚ್ಚದೆ ಮಾಣ್ಬುದೇ? ನೊಣನ ಕಂಡರೆ ಕಪ್ಪೆ ಹಿಡಿದಲ್ಲದೆ ಮಾಣ್ಬುದೇ? ಹಣವ ಕಂಡರೆ ಮನ ಕನಲಿದಲ್ಲದೆ ಮಾಣ್ಬುದೇ? ಬಿಸಿಯ ಕಂಡರೆ ಬೆಣ್ಣೆ ಕರಗಿದಲ್ಲದೆ ಮಾಣ್ಬುದೇ? ಹುಸಿಯ ಕಂಡರೆ ಲೋಕ ನಚ್ಚುವುದು, ಮಚ್ಚುವುದು. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ಇವರು ಮಚ್ಚಿಯೇನು? ನಮ್ಮ ನಾಯಿಗೆ ತಮ್ಮ ಮಗುವ ಕೊಡಬೇಡ.