Index   ವಚನ - 489    Search  
 
ಅಳಿಯ ಗೂಳಿಗೆ ಹೋದಾತ ಅತ್ತೆಯ ನೆರೆದರೆ ನಾದಿನಿಯರು ನೋಡಿ ಸೋಜಿಗವ ಮಾಡುತ್ತಿದಾರೆ ನೋಡಾ. ನಾದಿನಿಯರ ತಾಯಿ ಅತ್ತೆಯ ಕೊಂದು ಅಳಿಯನ ನುಂಗಿ ಪರಪುರುಷನ ನೆರೆದು ಮುತ್ತೈದೆಯಾದುದು ಸೋಜಿಗ, ಸೋಜಿಗ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.