Index   ವಚನ - 491    Search  
 
ಉರಿಯ ಗಗನದೊಳಗೆ ಶರೀರವಿಲ್ಲದ ತರುಣಿ ಉದಯವಾಗಿ ಉರಿಯ ಮಣಿಯ ಪವಣಿಗೆಯ ಮಾಡುವುದ ಕಂಡೆನಯ್ಯ. ಉರಿಯನುಂಡು, ಶರೀರವಿಲ್ಲದಾಕೆಯ ನೆರೆದು ಪರಮಾಮೃತವ ಸೇವಿಸಿ ಪರಮ ಪರಿಣಾಮದೊಳಗೋಲಾಡಿದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.