Index   ವಚನ - 492    Search  
 
ಇಚ್ಛಾಶಕ್ತಿ ತನ್ನ ಗರ್ಭದಲ್ಲಿ ಈರೇಳುಲೋಕವ ಹೆತ್ತಳು ನೋಡಾ. ಆ ಲೋಕಾಧಿ ಲೋಕಂಗಳೊಳಗೆ ತಾನೇಕಾಕಿಯಾಗಿ ಆ ಲೋಕದ ಉತ್ಪತ್ತಿ ಸ್ಥಿತಿ ಪ್ರಳಯಕ್ಕೊಳಗಾಗದೆ ನಿತ್ಯಳಾಗಿಪ್ಪಳು ನೋಡಾ. ಆ ಇಚ್ಛಾಶಕ್ತಿ ನಿಶ್ಚಿಂತನ ನೆರೆದು ನಿರಾಳವಾದುದು ತಾನೆಂದು ಕಂಡಾತನ[ನು] ಸರ್ವಜ್ಞ ಶರಣೆನೆಂಬೆನು. ಆತನ ಅಲ್ಲಮಪ್ರಭುವೆಂಬೆನು. ಆ ಪರಮ ನಿರಂಜನ ಪ್ರಭುವಿಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.