Index   ವಚನ - 506    Search  
 
ಸತ್ಯದ ಭೂಮಿಯಲ್ಲಿ ಭಕ್ತಿಯ ಬೆಳಸು ಕರಣದ ಕತ್ತಲೆಯೆಂಬ ಕಳೆಯ ಕಳೆದು ಶಕ್ತಿ ಭಕ್ತಿಯನೊಳಕೊಂಡು ನಿಂದ ಮುಕ್ತ್ಯಂಗನೆ ಸಚ್ಚಿದಾನಂದ ಸ್ವರೂಪೆ ನೋಡಾ. ನಿತ್ಯ ನಿಜತತ್ವ ನೆರೆದು, ಉತ್ಪತ್ತಿ ಸ್ಥಿತಿ ಪ್ರಳಯವ ಮೀರಿದ ಶರಣನ ಪರಮ ಭಕ್ತಿಯನೇನೆಂದುಪಮಿಸುವೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.