ಊಟದ ದೆಸೆಯಿಂದ ಹೆಚ್ಚಿ
ಉಡಿಗೆ ತೊಡಿಗೆಯ ಮೇಲೆ ಮೆರೆವಾತನನು ಕಂಡು,
ರೂಪು ಲಾವಣ್ಯ ಸುಖಭೋಗಿಗಳೆಂಬರಯ್ಯ.
ಈ ಲೋಕದ ಮಾನವರು
ಸುಖಿಗಳಾದರೆ ತನುವ ತಾಪತ್ರಯಾದಿಗಳು ಮುಟ್ಟಬಲ್ಲವೆ?
ಮಾಯಾ ಮೋಹವೆಂಬ ಮೊಲನಾಗರು ಹಿಡಿದು ಬಿಡದು ನೋಡಾ.
ಸುಖಿ ಸುಖಿಗಳೆಂಬ ಈ ಲೋಕದ ಕಾಕುವಿಚಾರವನೇನಂಬೆನಯ್ಯ?
ಭಕ್ತಿಯೇ ರೂಪು, ನಿತ್ಯವೇ ಲಾವಣ್ಯ, ಮುಕ್ತ್ಯಂಗನೆಯ ಕೂಡಿ
ಸುಖಿಸುವುದೇ ಸುಖ.
ಲಿಂಗಭೋಗೋಪಭೋಗಿಯಾದ ಪ್ರಸಾದ ಭೋಗವೇ ಭೋಗ.
ಇಂತಪ್ಪ ನಿರಂಗಸಂಗಿಗಳು ಅವಲೋಕದಲ್ಲಿಯೂ ಇಲ್ಲ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ūṭada deseyinda hecci
uḍige toḍigeya mēle merevātananu kaṇḍu,
rūpu lāvaṇya sukhabhōgigaḷembarayya.
Ī lōkada mānavaru
sukhigaḷādare tanuva tāpatrayādigaḷu muṭṭaballave?
Māyā mōhavemba molanāgaru hiḍidu biḍadu nōḍā.
Sukhi sukhigaḷemba ī lōkada kākuvicāravanēnambenayya?
Bhaktiyē rūpu, nityavē lāvaṇya, muktyaṅganeya kūḍi
sukhisuvudē sukha.
Liṅgabhōgōpabhōgiyāda prasāda bhōgavē bhōga.
Intappa niraṅgasaṅgigaḷu avalōkadalliyū illa nōḍā,
mahāliṅgaguru śivasid'dhēśvara prabhuvē.