ಸತ್ತುವೆಂಬ ಗುರುವಿನಲ್ಲಿ ಎನ್ನ ಸರ್ವಾಂಗವಡಗಿ
ಚಿತ್ರದ ಪ್ರತಿಮೆಯ ಅವಯವಂಗಳ ಶೃಂಗಾರದಂತೆ
ಆಕಾರವೆಂಬಂತೆ ಇರ್ದೆನಯ್ಯ.
ಚಿತ್ತೆಂಬ ಲಿಂಗದೊಳಗೆ ಮನವಡಗಿ ನವನಾಳದ ಸುಳುಹು ಕೆಟ್ಟು
ಸುಷುಪ್ತಿಯನೆಯ್ದಿದ್ದೆನಯ್ಯ. ಇದು ಕಾರಣ:
ಎನ್ನ ಜಾಗ್ರ ಸ್ವಪ್ನ ಸುಷುಪ್ತಿಯೆಂತಿಪ್ಪುದ
ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ.
ಆನಂದವೆಂಬ ಜಂಗಮದಲ್ಲಿ ಅರುಹು ಏಕತ್ವವಾಗಿ
ಅತ್ಮೋಹಂಯೆಂಬುದನರಿಯೆನು ನೋಡಾ,
ನಾನು ಪರಮಾತ್ಮನಾದ ಕಾರಣ.
ನಿತ್ಯವೆಂಬ ಪ್ರಸಾದದಲ್ಲಿ ಪ್ರಾಣವಡಗಿ ನಿತ್ಯಾನಿತ್ಯವನರಿಯದೆ
ಸಚ್ಚಿದಾನಂದ ನಿತ್ಯ ಪರಿಪೂರ್ಣನಾಗಿ ಅನಾದಿ ಭಕ್ತನಾದೆನಯ್ಯ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Sattuvemba guruvinalli enna sarvāṅgavaḍagi
citrada pratimeya avayavaṅgaḷa śr̥ṅgāradante
ākāravembante irdenayya.
Cittemba liṅgadoḷage manavaḍagi navanāḷada suḷuhu keṭṭu
suṣuptiyaneydiddenayya. Idu kāraṇa:
Enna jāgra svapna suṣuptiyentippuda
nī balleyallade mattāru ballaru hēḷā.
Ānandavemba jaṅgamadalli aruhu ēkatvavāgi
atmōhanyembudanariyenu nōḍā,
nānu paramātmanāda kāraṇa.
Nityavemba prasādadalli prāṇavaḍagi nityānityavanariyade
saccidānanda nitya paripūrṇanāgi anādi bhaktanādenayya.
Mahāliṅgaguru śivasid'dhēśvara prabhuvē.