ಗೇಣುದ್ದ ಒಡಲೊಳಗೆ ಬೆಟ್ಟದುದ್ದ ಮಾತು ಹುಟ್ಟಿತ್ತು ನೋಡಾ.
ಬೆಟ್ಟದುದ್ದ ಮಾತೆಲ್ಲ ಏತಕಯ್ಯಯೆಂದರೆ
ಗೇಣುದ್ದ ಒಡಲ ಹೂಣುವದಕ್ಕಾಗಿ ಕಾಣಾ.
ವಾಚಾಳತ್ವದಿಂದ ಉದರವ ಹೊರೆವವರೆಲ್ಲಾ ಗುರುವೆ?
ಇಂದ್ರಿಯಂಗಳಿಗೊಂದೊಂದು ಮಾತ ಕಲಿತು
ಸದಾಶಿವನ ಸಂಧಿಸಿ ಸರ್ವರಿಗೆ ತೋರಿಹೆನೆಂಬರು,ತಾವೇಕೆ ಕಾಣರೋ?
ತಾವು ಕಾಣದೆ, ತಮ್ಮಲ್ಲಿ ವಸ್ತು ವಿವೇಕವಿಲ್ಲದೆ
ಅನ್ಯರಿಗೆ ಹೇಳುವ ಬೋಧೆ, ಅದು ಅವಿಚಾರ ಕಾಣಾ.
ಗುರುತತ್ವದ ಬಲ್ಲ ಗುರು ಶುದ್ಧ ಚಿದ್ರೂಪನು. ಚಿನ್ಮಯನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Gēṇudda oḍaloḷage beṭṭadudda mātu huṭṭittu nōḍā.
Beṭṭadudda mātella ētakayyayendare
gēṇudda oḍala hūṇuvadakkāgi kāṇā.
Vācāḷatvadinda udarava horevavarellā guruve?
Indriyaṅgaḷigondondu māta kalitu
sadāśivana sandhisi sarvarige tōrihenembaru,tāvēke kāṇarō?
Tāvu kāṇade, tam'malli vastu vivēkavillade
an'yarige hēḷuva bōdhe, adu avicāra kāṇā.
Gurutatvada balla guru śud'dha cidrūpanu. Cinmayanu nōḍā,
mahāliṅgaguru śivasid'dhēśvara prabhuvē.