ಇಷ್ಟಲಿಂಗದ ಪೂಜೆ ಯಾವುದು? ಪ್ರಾಣಲಿಂಗದ ಪೂಜೆ ಯಾವುದು?
ಭಾವಲಿಂಗದ ಪೂಜೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ.
ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು,
ಅದು ಇಷ್ಟಲಿಂಗದ ಪೂಜೆ.
ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ
ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು
ಧ್ಯಾನವೆಂಬ ಹಸ್ತದಲ್ಲಿ ಹಿಡಿದು
ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ
ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.
ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ
ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ
ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ.
ಇವು ಮೂರು ಲಿಂಗದ ಅರ್ಚನೆ.
ಮೂರು ಲಿಂಗದ ಉಪಚಾರ.
ಶಿವಾರ್ಥಿಗಳಾದ ವೀರಶೈವರುಗಳು ಮಾಡುವ
ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Iṣṭaliṅgada pūje yāvudu? Prāṇaliṅgada pūje yāvudu?
Bhāvaliṅgada pūjeyāvuduyendare hēḷihe kēḷirayya.
Iṣṭaliṅgakke aṣṭavidhārcaneya māḍuvudu,
adu iṣṭaliṅgada pūje.
Ā liṅgavanu manas'sinalli dhyānisi
manōmadhyadalippa niḥkala brahmavanu
dhyānavemba hastadalli hiḍidu
karasthaladallippa liṅgada gottinalli kaṭṭi nerevudīga
prāṇaliṅgada pūjeyendu hēḷalpaṭṭittayya.
Manasu liṅgadalli tallīyavāgi nacci macci
accotti appi agaladippudē
bhāvaliṅgada pūjeyendu hēḷalpaṭṭittayya.
Ivu mūru liṅgada arcane.
Mūru liṅgada upacāra.
Śivārthigaḷāda vīraśaivarugaḷu māḍuva
liṅgārcaneya kramavendu hēḷalpaṭṭittayya,
mahāliṅgaguru śivasid'dhēśvara prabhuvē.