ದಶದಳ ಕಮಲದಲ್ಲಿ ಶಶಿಕಳೆ ಪಸರಿಸಲು
ಶಶಿಕಳೆಯೊಳಗೆ ರವಿಯ ಬೆಳಗು ನೋಡಾ.
ರವಿ ಶಶಿ ಶಿಖಿ ಏಕರಸಮಯವಾಗಿ
ಓಂಕಾರವೊಂದಾದ ನಾದ,
ಆ ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹುತ
ವಿಶುದ್ಧಿ ಆಜ್ಞೇಯದಲ್ಲಿ.
ಕಂಡು, ಕೂಡಿ ಸುಖಿಸುತಿರ್ದೆನಯ್ಯ,
ಆ ನಾದ ಬೆಳಗಿನ ಕಳೆ ಶೂನ್ಯದಲ್ಲಿ ಅಡಗಲು E585
ನಾನು ನೀನಾದೆನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Daśadaḷa kamaladalli śaśikaḷe pasarisalu
śaśikaḷeyoḷage raviya beḷagu nōḍā.
Ravi śaśi śikhi ēkarasamayavāgi
ōṅkāravondāda nāda,
ā ādhāra svādhiṣṭhāna maṇipūraka anāhuta
viśud'dhi ājñēyadalli.
Kaṇḍu, kūḍi sukhisutirdenayya,
ā nāda beḷagina kaḷe śūn'yadalli aḍagalu E585
nānu nīnādenu,
mahāliṅgaguru śivasid'dhēśvara prabhuvē.