Index   ವಚನ - 551    Search  
 
ಕನಸಿನ ಕಾಮಿನಿಯರ ರೂಪು ಮನಸಿಗೆ ರಮ್ಯವಾಗಿ ಕಾಣುವದು. ಅದು ಮನಸಿನ ಮಾಯ ಕಾಣಿಭೋ. ಮನಸಿನ ಮಾಯವನಳಿಯಲು ಕನಸಿನ ಕಾಮಿನಿಯರ ರೂಪು ಮನಸಿನಲ್ಲಿಲ್ಲ ನೋಡಾ. ಆ ಭ್ರಾಂತು ಭ್ರಮೆಗಳನಳಿದಾತನಲ್ಲದೆ ಪ್ರಾಣಲಿಂಗ ಸಂಬಂಧಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ