Index   ವಚನ - 553    Search  
 
ನೆಲನಿಲ್ಲದ ಬಯಲಭೂಮಿಯಲ್ಲಿ ನಿರ್ಬಯಲ ಬೀಜ ನೋಡಾ. ಅದರಂಕುರ ಮೂರು, ಫಲವಿಪ್ಪತ್ತೈದು ನೋಡಾ. ಪ್ರಥಮಾಂಕುರ ಶಿವ, ದ್ವಿತೀಯಾಂಕುರ ಸದಾಶಿವ, ಮೂರನೆ ಅಂಕುರ ಮಹೇಶ್ವರ. ಫಲವಿಪ್ಪತ್ತೈದು, ಪಂಚವಿಂಶತಿ ಲೀಲಾವಿಗ್ರಹ ನೋಡಾ. ಫಲವಿಪ್ಪತ್ತೈದು, ಅಂಕುರ ಮೂರನೊಳಕೊಂಡು ನಿಂದ ನಿರ್ವಯಲ ಪ್ರಾಣಲಿಂಗವೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.