Index   ವಚನ - 570    Search  
 
ಒಳಗೆಂದೇನು? ಹೊರಗೆಂದೇನು? ಅರುಹೆಂದೇನು? ಮರಹೆಂದೇನು? ತಾನೆಂದೇನು? ಇದಿರೆಂದೇನು? ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ. ಒಳಗು ತಾನೆ, ಹೊರಗು ತಾನೆ. ಅರುಹು ತಾನೆ, ಮರಹು ತಾನೆ. ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.