Index   ವಚನ - 571    Search  
 
ಆದಿಯೊಳಗೆ ಆಧಾರವಿಪ್ಪುದ ಕಂಡೆನಯ್ಯ. ಆಧಾರದೊಳಗೆ ಆದಿಯಿಪ್ಪುದ ಕಂಡೆನಯ್ಯ. ಆದಿ ಆಧಾರವ ನುಂಗಿ ಆಧಾರ ಆದಿಯ ನುಂಗಲು ಸಾಧ್ಯಸಾಧಕ, ಪೂಜ್ಯಪೂಜಕ, ದೇವ ದೇಹಿಕನೆಂಬವರಾರೂ ಇಲ್ಲದ ಎರಡಿಲ್ಲದ ನಿರಾಳ ನೀನೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.