Index   ವಚನ - 573    Search  
 
ನಾದ ಗುರುಮುಖವೆಂದೆಂಬರು. ಬಿಂದು ಲಿಂಗಮುಖವೆಂದೆಂಬರು. ಕಳೆ ಜಂಗಮಮುಖವೆಂದೆಂಬರು. ನಾದವೆಲ್ಲಿಯದು ಜೀವವಿಲ್ಲದವಂಗೆ? ಬಿಂದುವೆಲ್ಲಿಯದು ಕಾಯವಿಲ್ಲದವಂಗೆ? ಕಳೆಯೆಲ್ಲಿಯದು ಕರಣಂಗಳಿಲ್ಲದವಂಗೆ? ನಾದವ ಗುರುವೆಂದೆನ್ನೆ, ಬಿಂದುವ ಲಿಂಗವೆಂದೆನ್ನೆ. ಕಳೆಯ ಜಂಗಮವೆಂದೆನ್ನೆ. ನಾನುಳ್ಳನ್ನಕ್ಕರ ನೀನಲ್ಲದೆ, ನಾನೆಂಬುದಳಿದ ಬಳಿಕ, ನಾನಿಲ್ಲ ನೀನಿಲ್ಲ: ಸ್ವಯವಿಲ್ಲ ಪರವಿಲ್ಲ. ನಾದ ಬಿಂದು ಕಳಾತೀತನಾದ ಆದಿ ಸ್ವಯಂಭೂ ತಾನಾದ ಲಿಂಗೈಕ್ಯಂಗೆ ನನಗನ್ಯವಾಗಿ ಇನ್ನೇನನೂ ಹೇಳಲಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.