Index   ವಚನ - 585    Search  
 
ಪರುಷದ ಗಿರಿಯಲ್ಲಿ ಚಿಂತಾಮಣಿ ರತ್ನವ ಕಂಡೆನಯ್ಯ. ಅದು ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ. ಅತಿಶಯದ ಬೆಳಗಿನ ಬೆಳಗಿನೊಳು ಆನಂದಸುಖದೊಳಗೋಲಾಡುತಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.