ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯ.
ಚಿತ್ತೇ ಚಿಪ್ಪು, ಮುತ್ತೇ ವಸ್ತುವೆಂಬ
ಯುಕ್ತಿಯನಾರೂ ತಿಳಿಯರಲ್ಲಾ.
ಚಿಪ್ಪಳಿದು ಮುತ್ತ ಬೆರೆಸಲಾಗಿ
ನಿತ್ಯತ್ವ ಪದವಾಯಿತ್ತೆಂಬೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Cittadoḷagaṇa vastu muttinantippudayya.
Cittē cippu, muttē vastuvemba
yuktiyanārū tiḷiyarallā.
Cippaḷidu mutta beresalāgi
nityatva padavāyittembenu kāṇā,
mahāliṅgaguru śivasid'dhēśvara prabhuvē.