Index   ವಚನ - 599    Search  
 
ಕತ್ತಲೆಯ ಮನೆಯಲ್ಲಿ ಕಾಮಿನಿ ಮುತ್ತ ಸರಗೆಯ್ವದ ಕಂಡೆ. ಕತ್ತಲೆ ಹರಿದು, ಮನ ಬತ್ತಲೆಯಾಗಿ ತತ್ವಮಸಿ ವಾಕ್ಯದಿಂದತ್ತತ್ತ ತಾನಾಗಿ ತಾ ಸತ್ತ ಬಳಿಕ ಇನ್ನೆತ್ತಳ ಯೋಗ ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.