Index   ವಚನ - 600    Search  
 
ಮೃತಜೀವಿಯೆಂಬ ಹೆಂಗೂಸಿನ ಶಿರದಲ್ಲಿ ಅಮೃತದ ಸೋನೆ ಸುರಿವುತ್ತಿದೆ ನೋಡಾ. ಹಾಲುಮಳೆ ಕರೆದು ಆಕೆಯ ಮೇಲೆ ಮೇರೆದಪ್ಪಿ ಹರಿಯಲು ಆ ಬಾಲೆ ಅಳಿದು ಆ ಲೋಕದ ಪ್ರಾಣಿಗಳು ಸತ್ತು ಸಚರಾಚರಂಗಳ ಮೀರಿ ಸಚ್ಚಿದಾನಂದ ಶಿವೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.