Index   ವಚನ - 609    Search  
 
ಸಚ್ಚಿದಾನಂದನ ಸಂಕಲ್ಪಮಾತ್ರದಿಂದ ಮಿಥ್ಯಾ ಛಾಯೆ ತೋರಿತ್ತು ನೋಡಾ. ತಥ್ಯವೇ ಶಿವತತ್ವ, ಮಿಥ್ಯವೇ ಮಾಯಾಸೂತ್ರದ ಜಗಜ್ವಾಲ ನೋಡಾ. ತಥ್ಯವೇ ತನ್ನ ನಿಜವೆಂದು, ಮಿಥ್ಯವೇ ಹುಸಿಯೆಂದರಿವ ಶಿವತತ್ವಜ್ಞಾನಿಗಳಪೂರ್ವ ನೋಡಾ. ತಥ್ಯಮಿಥ್ಯವೆಂಬ ಹೊತ್ತುಹೋಕನತಿಗಳೆದ ನಿತ್ಯ ನಿರಂಜನನು ತಾನು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.