Index   ವಚನ - 619    Search  
 
ಮುಗಿಲ ಮರೆಯ ಸೂರ್ಯನಂತೆ, ನೆಲದ ಮರೆಯ ನಿಧಾನದಂತೆ, ಒರೆಯ ಮರೆಯ ಅಲಗಿನಂತೆ, ಹಣ್ಣಿನೊಳಗಣ ರಸದಂತೆ, ಶರಣನ ಶರೀರವ ಮರೆಗೊಂಡು, ಪರಮಪಾವನಮೂರ್ತಿ, ಪರಾಪರ, ತಾನು ತಾನಾಗಿರ್ದದನೇನೆಂಬೆನಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.