Index   ವಚನ - 621    Search  
 
ಅಟ್ಟುದನು ಅಡಲುಂಟೆ? ಸುಟ್ಟುದ ಸುಡಲುಂಟೇ ಅಯ್ಯ? ಬೆಂದ ಮಡಕೆ ಮರಳಿ ಧರೆಯ ಕೂಡಬಲ್ಲದೇ ಅಯ್ಯ? ಕರ್ಪುರವ ಅಗ್ನಿ ನುಂಗಿದ ಬಳಿಕ ಕರಿಯುಂಟೇ ಅಯ್ಯ? ಶರಣನ ಲಿಂಗ ನುಂಗಿ, ಲಿಂಗವ ಶರಣ ನುಂಗಿ, ನದಿಯೊಳಗೆ ನದಿ ಬೆರೆಸಿದಂತೆ ಬೆರೆದು, ಶುದ್ಧ ನಿರ್ಮಲನಾದ ಲಿಂಗೈಕ್ಯಂಗೆ, ಭಿನ್ನಾಭಿನ್ನವ ಕಲ್ಪಿಸುವ ಅಜ್ಞಾನಿಗಳ ಎನಗೊಮ್ಮೆ ತೋರದಿರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.