Index   ವಚನ - 629    Search  
 
ಆರಾರರಿಂದ ಮೀರಿ ತೋರುವ[ಸೀಮೆ] ನಿಸ್ಸೀಮೆ ನೋಡ. ಆ ಸೀಮೆಯರಸು ಅನಾಹತನು. ಆವ ಆವರಣವೂ ಇಲ್ಲದ ನಿರಾವರಣಂಗೆ ಮಾಯಾವರಣವಿಲ್ಲದ ನಿರ್ಮಾಯನೆ ಅಂಗವಾಗಿಪ್ಪನು. ಈ ಲಿಂಗಾಂಗ ಸಂಯೋಗವ ತತ್ವಮಸ್ಯಾದಿ ವಾಕ್ಯಾರ್ಥವೆಂಬ ವಾಚಾಳಿಗೆ ತಂದು ಹೇಳಲಿಲ್ಲ ವಾಚಾತೀತನಾದ ಶಿವೈಕ್ಯ[ನ]ನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.