Index   ವಚನ - 656    Search  
 
ಕಿವಿಯಿಂದ ಕೇಳಿದುದು, ಕಣ್ಣಿಂದ ಕಂಡುದು, ಘ್ರಾಣದಿಂದ ಘ್ರಾಣಿಸಿದುದು, ಜಿಹ್ವೆಯಿಂದ ಭುಂಜಿಸಿದುದು, ಸ್ಪರ್ಶದಿಂದ ಮುಟ್ಟಿದುದು, ತೃಪ್ತಿಯಿಂದ ಪರಿಣಾಮಿಸಿದುದು, ಲಿಂಗವೆಂದೆಂಬುದು ಸಹವರ್ತಿಯೆನಿಸಿಕೊಂಬುದು. ಒಂದಕೊಂದು ಪ್ರಾಣ ಒಂದನೊಂದು ಕೂಡಿಹುದು ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.