Index   ವಚನ - 657    Search  
 
ಲಿಂಗದೇಹಿ ಶಿವಾತ್ಮಕನು ಲಿಂಗದಾಚಾರದಲ್ಲಿಯೇ ನಡೆವನಯ್ಯ.ಲೋಕವರ್ತಕನಲ್ಲ. ಲೋಕಚಾತುರಿಕೆ, ಲೋಕವ್ಯವಹರಣೆಯನನುಕರಿಸಿ ನಡೆವವನಲ್ಲ. ಶಿವಜ್ಞಾನ ಶಿವಕ್ರಿಯಾಪ್ರಕಾಶವ ಸಂಬಂಧಿಸಿಕೊಂಡು ಸರ್ವಾಂಗವೂ ಲಿಂಗರೂಪಾಗಿ ಸಮರ್ಪಿಸಿಕೊಂಡು ಲಿಂಗದೊಡನೆ ಭುಂಜಿಸುತ್ತಿಪ್ಪನಯ್ಯ. ಶಿವಸ್ಮರಣೆಯಿಂದ ಸ್ವೀಕರಿಸುತ್ತಿಪ್ಪುದೇ ಸಹಭೋಜನವೆನಿಸಿಕೊಂಡಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.