ಅಹಂ ಬ್ರಹ್ಮವೆಂದೆಂಬ ಜ್ಞಾನಹೀನನಾದ ವಾಗದ್ವೈತಿಯಲ್ಲ.
ಅಹಂ ಭಿನ್ನವೆಂದೆಂಬ ದ್ವೈತ ಪಶುಮತವಲ್ಲ.
ಸ್ವರ್ಗ ಮರ್ತ್ಯ ಪಾತಾಳದೊಳಗೆ ಶರಣ ಲಿಂಗ ಮತ ಬೇರೆ.
ಈ ಶರಣ ಲಿಂಗದ ನಿಲುಕಡೆಯನು
ಪರಶಿವಜ್ಞಾನಿಗಳು ಬಲ್ಲರಲ್ಲದೆ
ಪ್ರಪಂಚ ಜೀವಿಗಳೆಂದೂ ಅರಿಯರು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
haṁ brahmavendemba jñānahīnanāda vāgadvaitiyalla.
Ahaṁ bhinnavendemba dvaita paśumatavalla.
Svarga martya pātāḷadoḷage śaraṇa liṅga mata bēre.
Ī śaraṇa liṅgada nilukaḍeyanu
paraśivajñānigaḷu ballarallade
prapan̄ca jīvigaḷendū ariyaru kāṇā,
mahāliṅgaguru śivasid'dhēśvara prabhuvē.