Index   ವಚನ - 692    Search  
 
ಕಾಯದ ರೂಪನು ಕಂಗಳು ನುಂಗಿತ್ತು. ಪ್ರಾಣದ ರೂಪನು ನೆನಹು ನುಂಗಿತ್ತು. ಭಾವದ ರೂಪನು ಅರುಹು ನುಂಗಿತ್ತು. ಇವೆಲ್ಲರ ರೂಪನು ನಿರೂಪು ನುಂಗಿತ್ತು, ಆ ನಿರೂಪ ಸ್ವರೂಪೀಕರಿಸಿ ನಾ ನುಂಗಿದೆನು. ಆ ನಿರೂಪು ಸ್ವರೂಪವೆರಡೂ ಬಯಲು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.