ತನ್ನ ಹಿತ್ತಿಲೊಳು ಮರುಜೇವಣಿಗೆಯಿದ್ದು,
ನಾರುಬೇರುಗಳಿಗೆ ಹರಿವ
ಮನುಜರಿಗೆ ನಾನೇನೆಂಬೆನಯ್ಯ!
ತನ್ನೊಳಗೆ ಶಿವಲಿಂಗವಿದ್ದು,
ಅನ್ಯದೈವಕ್ಕೆರಗುವ ಕುನ್ನಿ ಮನುಜರಿಗೆ ನಾನೆಂಬೆನಯ್ಯ!
ತ್ರೈಲೋಚನ ಮನೋಹರ ಮಾಣಿಕೇಶ್ವರಲಿಂಗ,
ಪಾಪಿಯ ಕಣ್ಣಿಗೆ ಪರುಷ ಕಲ್ಲಾದಂತೆ ಅಯ್ಯ ನೀನು.
Art
Manuscript
Music
Courtesy:
Transliteration
Tanna hittiloḷu marujēvaṇigeyiddu,
nārubērugaḷige hariva
manujarige nānēnembenayya!
Tannoḷage śivaliṅgaviddu,
an'yadaivakkeraguva kunni manujarige nānembenayya!
Trailōcana manōhara māṇikēśvaraliṅga,
pāpiya kaṇṇige paruṣa kallādante ayya nīnu.