ನುಡಿವಲ್ಲಿ ಕಿಂಕಲವನರಿದು,
ಕರವ ಬೀಸುವಲ್ಲಿ ತುಷಾರ ಕೀಟವನರಿದು,
ಅಡಿಯಿಡುವಲ್ಲಿ ಪೊಡವಿಯಲ್ಲಿ
ಹೊರಹೊಮ್ಮಿದ ಜೀವನ ಚೇತನಾದಿಗಳನರಿದು
ಮತ್ತೆ, ನೀಡುವಲ್ಲಿ ಹಿಡಿವಲ್ಲಿ,
ಮತ್ತೊಂದ ಒಡಗೂಡುವಲ್ಲಿ, ಒಡಗೂಡಿ ಬಿಡುವಲ್ಲಿ
ಸರ್ವದಯಕ್ಕೆ ಪಡಿಪುಚ್ಚವಿಲ್ಲದಿರಬೇಕು.
ಇಂತೀ ಸಡಗರದ ಚಿತ್ತ
ದಸರೇಶ್ವರಲಿಂಗವನೊಡಗೂಡುವ ಭಕ್ತಿ.
Art
Manuscript
Music
Courtesy:
Transliteration
Nuḍivalli kiṅkalavanaridu,
karava bīsuvalli tuṣāra kīṭavanaridu,
aḍiyiḍuvalli poḍaviyalli
horahom'mida jīvana cētanādigaḷanaridu
matte, nīḍuvalli hiḍivalli,
mattonda oḍagūḍuvalli, oḍagūḍi biḍuvalli
sarvadayakke paḍipuccavilladirabēku.
Intī saḍagarada citta
dasarēśvaraliṅgavanoḍagūḍuva bhakti.