Index   ವಚನ - 4    Search  
 
ಒಂದನಹುದೆನಬೇಡ, ಒಂದನಲ್ಲಾ ಎನಬೇಡ. ಉಭಯ ಉಳ್ಳನ್ನಕ್ಕ ಬಹುದುಃಖದ ಒಡಲು. ಅಮೃತವ ಕುಡಿಯ ಕೊಟ್ಟು ವಿಷವ ಕುಡಿದೆನೆನಬೇಡ ವಿಷವ ಕುಡಿಯ ಕೊಟ್ಟು ಅಮೃತವ ಕುಡಿದೆನೆನಬೇಡ. ಆ ಗುಣ ತಮ್ಮಲ್ಲಿಯೆ ದೃಷ್ಟವಾಗಿ ಶ್ರವವನರಿದು ಹಂದೆಯ ಹೊರಬೇಡ. ಇಂತೀ ಗುಣವ ನಿನ್ನ ನೀ ಕೇಳಿ ತಿಳಿದಡೆ ನಿನಗದು ಅನ್ಯಭಿನ್ನವಿಲ್ಲ, ಅದು ತನ್ಮಯಮೂರ್ತಿ ದಸರೇಶ್ವರಲಿಂಗವು.