Index   ವಚನ - 3    Search  
 
ಅಡುವ ಮಡಕೆಯ ತೋರಿ ಶಿಶುವಿನ ಹಸುವ ಅಡಗಿಸುವವಳಂತೆ, ಬರಿದೆ ಗುಮ್ಮನಿದೆಯೆಂದು ಶಿಶುವ ಬೆದರಿಸಿ ಹಸುಳೆಯ ಅಡಗಿಸುವವಳಂತೆ, ಎನ್ನ ಗಸಣಿಗಾರದೆ ಗುರುಚರವೆಂಬ ಬರಿಯ ಇರವ ತೋರಿ, ನೀನು ಎಲ್ಲಿ ಅಡಗಿದೆ? ನಿನ್ನ ಕುರುಹ ತ್ರಿವಿಧದಲ್ಲಿಯೂ ಕಾಣೆ. ಅದು ನಿನ್ನ ಗನ್ನವೊ? ಎನ್ನ ವಿಶ್ವಾಸದ ಹೀನವೊ? ಉಭಯವೂ ನಿನ್ನ ಕೇಡು. ಆಳಿನ ಅಪಮಾನ ಆಳ್ದಂಗೆ ತಪ್ಪದು. ನೀನೆ ಕೆಡುವೆ, ನಿನ್ನೊಳಗೆ ಮುನ್ನವೆ ನಾ ನಷ್ಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.