ಉಪೇಕ್ಷೆಯುಳ್ಳನ್ನಕ್ಕ ಭಕ್ತನಲ್ಲ.
ಹಿತಶುತ್ರುವಾಗಿಹನ್ನಕ್ಕ ಮಾಹೇಶ್ವರನಲ್ಲ.
ಪರದ್ರವ್ಯಭಕ್ಷಿತ ಪ್ರಸಾದಿಯಲ್ಲ.
ಪ್ರಜ್ಞಾಹೀನ ಪ್ರಾಣಲಿಂಗಿಯಲ್ಲ.
ಕುಚಿತ್ತ ಅಪಸರೆಯ ಕ್ಷಣಿಕ ಶರಣನಲ್ಲ.
ಉಪಮಾ ಭೇದ ಗುಪ್ತಪಾತಕ ಐಕ್ಯನಲ್ಲ.
ಇಂತೀ ಷಡುಸ್ಥಲಂಗಳ ಸ್ಥಾನ ವಿವರಂಗಳನರಿತು
ಸ್ಥಲನಿರ್ವಾಹಿಯಾಗಿ ತತ್ವದ ಮುಖದಿಂದ ನಿತ್ಯ ಅನಿತ್ಯವ ತಿಳಿದು
ಪರತತ್ವದ ಗೊತ್ತಿನಲ್ಲಿ ನಿಜ ನಿರವಯವಪ್ಪ ಆತ್ಮನ
ಬೆಚ್ಚಂತೆ ಬೈಚಿಟ್ಟು
ತತ್ಕಾಲ ಉಚಿತವನರಿದು
ಕಾಂತಿ ನಷ್ಟವಾಗಿ ಕಳವಳಿಸಿ ಕಂಗೆಡದೆ
ಕುರುಹಿನ ಲಕ್ಷ್ಯದಲ್ಲಿ ಚಿತ್ತ ಸಮೂಹದಲ್ಲಿ ಎಚ್ಚರಿಕೆ
ನಿಜವಸ್ತುವಿನಲ್ಲಿ ಚಿತ್ತು ಲೇಪವಾದುದು
ಸಾವಧಾನ ಸಂಬಂಧಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Upēkṣeyuḷḷannakka bhaktanalla.
Hitaśutruvāgihannakka māhēśvaranalla.
Paradravyabhakṣita prasādiyalla.
Prajñāhīna prāṇaliṅgiyalla.
Kucitta apasareya kṣaṇika śaraṇanalla.
Upamā bhēda guptapātaka aikyanalla.
Intī ṣaḍusthalaṅgaḷa sthāna vivaraṅgaḷanaritu
sthalanirvāhiyāgi tatvada mukhadinda nitya anityava tiḷidu
paratatvada gottinalli nija niravayavappa ātmana
beccante baiciṭṭu
Tatkāla ucitavanaridu
kānti naṣṭavāgi kaḷavaḷisi kaṅgeḍade
kuruhina lakṣyadalli citta samūhadalli eccarike
nijavastuvinalli cittu lēpavādudu
sāvadhāna sambandhiya sambandha.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.