Index   ವಚನ - 19    Search  
 
ಏತರ ದೊಣ್ಣೆಯಲ್ಲಿ ಹೊಯ್ದಡೂ ಪೂಸನಪ್ಪನು, ಆವ ಪರಿಯಲ್ಲಿ ಸವೆದು ಮಾಡಿದಡೂ ವಸ್ತುವಿಗೆ ಲೇಸಪ್ಪುದು. ಶ್ವೇತನ ಪುಷ್ಪದಂತೆ, ಭಾಸುರನ ಕಿರಣದಂತೆ, ಪರುಷ ಕ್ರೋಧದಿಂದ ಉರವಣೆಯಲ್ಲಿ ಲೋಹವ ಬೆರಸಿದಂತೆ, ಕ್ಷುಧೆ ಅಡಸಿದವಂಗೆ ಪಾಲ್ಗಡಲ ತಡಿಯಲ್ಲಿ ತಳಿದವನಂತೆ, ಆವ ಪರಿಯಲ್ಲಿ ಸವೆದಡೂ ವಸ್ತು ಭಾವಕೆಂದಲ್ಲಿ ಶಿವಾರ್ಪಣ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.