ತಮದ ಗುರಿಯ ಜ್ಯೋತಿಯ ಕುಡಿವೆಳಗಿನ ಸರದಲ್ಲಿ
ಎಸಲಿಕ್ಕಾಗಿ,
ಗುರಿಯಲ್ಲಿಯೆ ಸರ ಪರಿಹರಿಸಿ
ಆ ಸರದಲ್ಲಿಯೇ ತಮ ಪರಿಹರಿಸಿತ್ತು.
ಲಕ್ಷ್ಯದಲ್ಲಿಯೆ ಚಿತ್ತ, ಚಿತ್ತದಲ್ಲಿಯೆ ಲಕ್ಷ್ಯ ಅಲಕ್ಷ್ಯವಾಯಿತ್ತು.
ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Tamada guriya jyōtiya kuḍiveḷagina saradalli
esalikkāgi,
guriyalliye sara pariharisi
ā saradalliyē tama pariharisittu.
Lakṣyadalliye citta, cittadalliye lakṣya alakṣyavāyittu.
Śambhuvininditta svayambhavinindatta atibaḷa nōḍā,
mātuḷaṅga madhukēśvaranu.