Index   ವಚನ - 43    Search  
 
ತಾನಿರಿಸಿದ ಕಡವರವೆಂದಡೆ ಸಾಕ್ಷಿಯಿಲ್ಲದೆ ಕುರುಹನರಿಯದೆ ಅಗೆಯಬಹುದೆ? ಸಕಲ ವೇದ ಶಾಸ್ತ್ರ ಪುರಾಣ ಆಗಮಂಗಳ ತಾ ಬಲ್ಲನೆಂದಡೆ ಕ್ರೀಯಿಲ್ಲದೆ ಜ್ಞಾನಹೀನವಾಗಿ ಭಾವಶುದ್ಧವಿಲ್ಲದೆ ಮತ್ತೇನುವನರಿಬಲ್ಲನೆ? ಇದು ಕಾರಣದಲ್ಲಿ ಕ್ರೀಗೆ ಪೂಜೆ, ಅರಿವಿಂಗೆ ತ್ರಿವಿಧದ ಬಿಡುಗಡೆ, ಆ ಬಿಡುಗಡೆಯ ಅಡಿಯಮೆಟ್ಟಿದ ಶರಣ ಉಂಡುಪವಾಸಿ ಬಳಸಿ ಬ್ರಹ್ಮಚಾರಿ. ಪಳುಕಿನ ವರ್ತಿಯಂತೆ, ತಿಲರಸ ಅಪ್ಪುವಿನಂತೆ, ಹೊದ್ದಿಯೂ ಹೊದ್ದದ ನಿಜಲಿಂಗಾಗಿಯ ಯೋಗ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು.