Index   ವಚನ - 44    Search  
 
ತ್ರಿವಿಧ ಕ್ರೀಯಿಂದ ಭೇದವನರಿತು ಮಾಡುವುದು ಭಕ್ತಿಸ್ಥಲ. ಚತುರ್ವಿಧ ಫಲಪ್ರಾಪ್ತಿಯ ಅನುಭವಿಸದೆ ನಿಶ್ಚಯ ವಸ್ತುವ ಕಾಬುದು ಮಾಹೇಶ್ವರಸ್ಥಲ. ಪಂಚೇಂದ್ರಿಯಂಗಳಲ್ಲಿ ಸಂಚಿತದಲ್ಲಿ ಬಂದುದನರಿದು ಲಿಂಗಾರ್ಪಿತದಿಂದ ಕೊಂಬುದು ಪ್ರಸಾದಿಸ್ಥಲದಂಗದ ಇರವು. ಷಡಾಧಾರಂಗಳಿಂದ ಸುಳಿದ ಸೂಕ್ಷ್ಮದ ಆತ್ಮನ ನೆಲೆಯನರಿದು ಕೂಡುವ ಕೂಟ ಪ್ರಾಣಲಿಂಗಿಸ್ಥಲದ ಇರವು. ಸುಖದುಃಖವೆಂಬ ಉಭಯವನಳಿದು ಬೆರಗು ನಿಬ್ಬೆರಗಾದುದು ಶರಣಸ್ಥಲದ ಇರವು. ಸುಗಂಧ ಗಂಧವ ಅಗ್ನಿಯಲ್ಲಿ ಸಂಬಂಧಿಸಿ ಅಂಗ ಅಗ್ನಿಯೊಳಡಗಿ ಗಂಧ ಧೂಮದಲ್ಲಿ ತಲೆದೋರಿ ಧೂಮ ಹಿಂಗೆ ಆ ಗಂಧ ಅಲ್ಲಿಯೇ ಅಡಗಿದಂತೆ ನಿಂದುದು ಐಕ್ಯಸ್ಥಲ. ಇಂತೀ ಷಡುಸ್ಥಲ ತ್ರಿಕರಣ ಶುದ್ಧಾತ್ಮಂಗಲ್ಲದೆ ಸಾಧ್ಯವಲ್ಲ ನೋಡಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.