Index   ವಚನ - 56    Search  
 
ಪೃಥ್ವಿಯ ಅಂಶಿಕ ಶರೀರ ದರ್ಪಗೆಡುವುದ ಕಂಡು, ಅಪ್ಪುವಿನ ಅಂಶಿಕ ಶುಕ್ಲ ಶೋಣಿತ ಜಲ ಕುಪ್ಪಳಿಸುವುದ ಕಂಡು, ತೇಜದ ಅಂಶಿಕ ಅಗ್ನಿ ಡಾವರವಿಲ್ಲದುದ ಕಂಡು, ವಾಯುವಿನ ಅಂಶಿಕ ಸರ್ವಾಂಗದಲ್ಲಿ ವೇದಿಸದೆ ನಾಡಿಗಳಲ್ಲಿ ಭೇದಿಸದೆ ಆತ್ಮನು ಗಾಢವಿಲ್ಲದುದ ಕಂಡು, ಆಕಾಶವನವಗವಿಸುವ ಆಲಿಸೂತ್ರ ಓಸರಿಸುವುದ ಕಂಡು, ಮತ್ತಿನ್ನೇತರ ಅರಿವು? ಇಂತಿವು ದೃಷ್ಟವಿದ್ದಂತೆ ನಷ್ಟವನೆಯ್ದುವುದಕ್ಕೆ ಮುನ್ನವೆ, ತನ್ನಯ ಲಕ್ಷ್ಯದ ಇಷ್ಟದಲ್ಲಿ ಚಿತ್ತವನನುಕರಿಸಿ ಸುಚಿತ್ತನಾದವ ಸಾವಧಾನಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.