Index   ವಚನ - 74    Search  
 
ಮಾಂಸ ಪಿಂಡತ್ರಯ, ಸೂಕ್ಷ್ಮ ಪಿಂಡತ್ರಯ, ಕಾರಣ ಪಿಂಡತ್ರಯ ಇಂತಿವ ಶೋಧಿಸಿ, ಲಿಂಗವ ಸಾಗಿಸಿ ದೀಕ್ಷೆಯ ಮಾಡಬೇಕು. ಇದು ಸದ್ಗುರು ಮೂರ್ತಿಯ ತೆರ. ಶಂಭುವಿನಿಂದಿತ್ತು ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.