Index   ವಚನ - 75    Search  
 
ಮಾರುತನ ಮನೆಯಂತೆ ಉದಕ ಮುಕುರದ ಬಿಂಬದಂತೆ ರತ್ನಕಾಂತಿಯ ಕಳೆಯಂತೆ ಪಾವಕದ ಪ್ರಥಮ ಬೀಜದಂತೆ ಸುವರ್ಣವನೊಡಗೂಡಿದ ಸುವಳಿಯಂತೆ ಮರೀಚಿ[ಯ] ಕೂಡಿದ ವರುಣನಂತೆ ಸುನಾದವನೊಳಕೊಂಡ ಬಯಲಿನಂತೆ ಇಂತೀ ನಾಮ ರೂಪು ಪಿಂಡಜ್ಞಾನ ಭೇದ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.