Index   ವಚನ - 83    Search  
 
ಲಿಂಗಾಂಗವಾದ ಭೋಗ ಭೋಜ್ಯಂಗಳ ತೆರನೆಂತುಟೆಂದಡೆ: ಅವುದ ಕೂಡಿದಲ್ಲಿಯೂ ಬಿಂದು ತಿಲಸಾರದಂತಿರಬೇಕು. ಅವುದ ಬೆರಸಿದಲ್ಲಿಯೂ ಮುಕುರದ ಬಿಂಬದ ಪ್ರತಿಬಿಂಬದಂತೆ ಸಂಗ ತೋರಿ ಅಂಗವಳಿದಿರಬೇಕು. ಇದು ಲಿಂಗಾಂಗಿಯ ಮುಟ್ಟು, ಸುಸಂಗಿಯ ನಿರತ ಸ್ವಯಾಂಗಿಯ ಉಭಯದ ಮುಟ್ಟು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.