Index   ವಚನ - 84    Search  
 
ವಾದ್ಯಕ್ಕೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ? ಅರಿವಿಂಗೆ ಬಂಧವಲ್ಲದೆ ಅರುಹಿಸಿಕೊಂಬವಂಗೆ ಬಂಧುವುಂಟೆ? ಅರಿದೆಹೆನೆಂಬ ಭ್ರಮೆ ಅರುಹಿಸಿಕೊಂಡಹೆನೆಂಬ ಕುರುಹು ಉಭಯ ನಾಸ್ತಿಯಾದಲ್ಲಿ ಭಾವಶುದ್ಧವಿಲ್ಲ. [ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ], ಮಾತುಳಂಗ ಮಧುಕೇಶ್ವರನು.