ಸಂಚದ ಸರಾಗದಂತೆ,
ಮಿಂಚಿನ ಕುಡಿವೆಳಗಿನ ಸಂಚಾರದಂತೆ,
ಉರಿಯ ನಾಲಗೆಯ ದ್ರವದ ತರಂಗದಂತೆ,
ಪನ್ನಗನ ಜಿಹ್ವೆಯ ನಿಳಿವಳಿಯಂತೆ,
ಚಮತ್ಕಾರದ ಅಸಿಯ ಗುಣಮೊನೆಯಂತೆ,
ಅಶ್ವಪರ್ಣದ ಅಗ್ರದ ಬಿಂದುವಿನ ಅಂದದಾತ್ಮನ ತಿಳಿದು,
ಸರ್ವೇಂದ್ರಿಯದಲ್ಲಿ ಮುಂಚುವುದಕ್ಕೆ ಮುನ್ನವೆ
ಆತ್ಮನ ಉಚಿತವನರಿದು,
ರಸ ಬೆಂಕಿಯಲ್ಲಿ ಬೆರೆದಂತಾಗಬೇಕು;
ಈ ಗುಣ ಸಾವಧಾನಿಯ ಸಂಬಂಧ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
San̄cada sarāgadante,
min̄cina kuḍiveḷagina san̄cāradante,
uriya nālageya dravada taraṅgadante,
pannagana jihveya niḷivaḷiyante,
camatkārada asiya guṇamoneyante,
aśvaparṇada agrada binduvina andadātmana tiḷidu,
sarvēndriyadalli mun̄cuvudakke munnave
ātmana ucitavanaridu,
rasa beṅkiyalli beredantāgabēku;
ī guṇa sāvadhāniya sambandha.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.