ಪ್ರಮಾಣವ ಪ್ರಮಾಣಿಸಿದಲ್ಲಿ ತಪ್ಪದಿಪ್ಪೆ.
ಅಪ್ರಮಾಣ ಅಗೋಚರವೆಂದಡೆ
ಅತ್ಯತಿಷ್ಠದ್ದಶಾಂಗುಲನಾಗಿಪ್ಪೆ.
ಪೂರ್ವಕ್ಕೆ ಭಾವಜ್ಞನಾಗಿ,
ಉತ್ತರಕ್ಕೆ ತೊಟ್ಟುಬಿಟ್ಟು ಹಣ್ಣಿನಂತೆ
ನಿಶ್ಚಯನಾಗಿಪ್ಪೆ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Pramāṇava pramāṇisidalli tappadippe.
Apramāṇa agōcaravendaḍe
atyatiṣṭhaddaśāṅgulanāgippe.
Pūrvakke bhāvajñanāgi,
uttarakke toṭṭubiṭṭu haṇṇinante
niścayanāgippe.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.