Index   ವಚನ - 100    Search  
 
ಹುತ್ತಕ್ಕೆ ಸರ್ಪನಾಗಿ, ಉದಕಕ್ಕೆ ಒಳ್ಳೆಯಾಗಿ, ಕೊಂಬೆಗೆ ಕೋಡಗನಾಗಿ ಅವರವರ ಬೆಂಬಳಿಯಲ್ಲಿ ಅಜಬೀಜವ ಕಾವ ಜಂಬುಕನಂತೆ ತಿರುಗಲೇತಕ್ಕೆ? ಆಯುಷ್ಯ ತೀರಿದಲ್ಲಿ ಮರಣ, ಐಶ್ವರ್ಯ ಹೋದಲ್ಲಿ ದಾರಿದ್ರ್ಯ ಬಪ್ಪುದು ಎಲ್ಲಿದ್ದಡೂ ತಪ್ಪದೆಂದರಿದ ಮತ್ತೆ ಬಾಯಿಮುಚ್ಚಿ ಸತ್ತಂತಿಪ್ಪ ತೆರ. ಇದು ಭಕ್ತಿವಿರಕ್ತಿಯ ಪಥ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.