ಆಗಬಾರದಾಗಿಂಗೆ ನಿಲ್ಲಬಾರದ ನಿಲುವು, ಮಾಡಬಾರದ ಮಾಟ,
ಬರಬಾರದ ಬರವಿಂಗೆ ಬಂದ ಪರಿಯ ನೋಡಾ!
ಈ ಬಂದ ಬಂಧನದಲ್ಲಿ ನೊಂದು ಬೆಂದರು
ಹರಿವಿರಂಚಿ ಸುರಪಾದಿ ಸಕಲರೆಲ್ಲ.
ಇದನರಿದು ಹಿಂದುಮುಂದಾದೆನು ಕಾಣಾ
ನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Āgabāradāgiṅge nillabārada niluvu, māḍabārada māṭa,
barabārada baraviṅge banda pariya nōḍā!
Ī banda bandhanadalli nondu bendaru
hariviran̄ci surapādi sakalarella.
Idanaridu hindumundādenu kāṇā
niran̄jana cannabasavaliṅgā.